9th Maths date 22-07-2020

ಈ ಪಾಠದಲ್ಲಿ ಬಿಂದುಗಳು ಕೆರೆಗಳು ಹಾಗೂ ಮೇಲ್ಮೈ ವಿಸ್ತೀರ್ಣದ ಕುರಿತಾಗಿ ವಿವರಿಸಲಾಯಿತು. ಪ್ರತಿಯೊಂದನ್ನು ದೃಷ್ಟಾಂತ ಸಮೇತವಾಗಿ ವಿವರಿಸಿದ್ದು ಬಹು ಸೂಕ್ತವಾಗಿತ್ತು .
ಅವುಗಳ ಪರಿಕಲ್ಪನೆಯನ್ನು ಬಹು ಚೆನ್ನಾಗಿ ಮೂಡಿಸಲಾಗಿತ್ತು . ರೇಖೆಗಳು ಬಿಂದುಗಳು ಹಾಗೂ ಮೇಲ್ಮೈ ವಿಸ್ತೀರ್ಣ ಕುರಿತಾದ ಚಟುವಟಿಕೆಗಳನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿ ತೋರಿಸಲಾಯಿತು 
     ನಂತರ ಸ್ವಯಂ ಸಿದ್ಧಿಗಳು ಒಟ್ಟು ಏಳು ಸ್ವಯಂ ಸಿದ್ಧಿಗಳು ಅವುಗಳ ವ್ಯಾಖ್ಯೆಗಳನ್ನು ಒಂದೊಂದಾಗಿ ವಿಶ್ಲೇಷಿಸುತ್ತಾ ಉದಾಹರಣೆ ಸಮೇತವಾಗಿ ವಿವರಿಸಿದರು. ಪ್ರತಿ ಸ್ವಯಂ ಸಿದ್ದಕ್ಕೆ ಕೊಟ್ಟಂಥ ಚಟುವಟಿಕೆ ಹಾಗೂ ಉದಾಹರಣೆಗಳು ತುಂಬಾ ಆಕರ್ಷಣೀಯವಾಗಿದೆ ಎಂಬುದರಲ್ಲಿ ಸಂಶಯವಿಲ್ಲ.ಉದಾಹರಣೆಗೆ ಹೇಳಬೇಕೆಂದರೆ ಸಮನಾಗಿರುವ ಅಂಶಗಳಿಂದ ಮಾಂಸಗಳನ್ನು ಕಳೆದಾಗ ಉಂಟಾಗುವ ಮೊತ್ತಗಳು ಪರಸ್ಪರ ಸಮ ಎಂಬುದನ್ನು ಚೆನ್ನಾಗಿ ನಿರೂಪಿಸಲಾಯಿತು.ಸಮನಾದ ತೂಕವುಳ್ಳ ಇಬ್ಬರು ವ್ಯಕ್ತಿಗಳನ್ನು ನಿಲ್ಲಿಸಿ ಪ್ರತಿ ಇರುವವರಲ್ಲಿಯೂ ಹತ್ತು ಕೆಜಿ ಭಾರವಿರುವ ಬ್ಯಾಗನ್ನು ಕೊಟ್ಟು ಆಗ ಅವರ ತೂಕ ಎಷ್ಟು ಎಂದು ಕೇಳಿದ್ದು ತುಂಬಾ ಸರಳವಾದ ಚಟುವಟಿಕೆಗಾಗಿಯೂ ಆಕರ್ಷಣೀಯವಾದ ಚಟುವಟಿಕೆಯಾಗಿ ಕಂಡು ಬಂತು .

Comments